Wednesday, July 1, 2009

ಗ್ರಾಮೀಣ ಯುವಜನರು ಆಧುನಿಕತೆಯ ಸವಾಲುಗಳನ್ನು ಎದುರಿಸಲು

ಶೈಕ್ಷಣಿಕ ಚಿತ್ರ ನಿರ್ಮಾಣದ ಉದ್ದೇಶ
ಖಾಸಗೀಕರಣದ ಈ ಕಾಲಘಟ್ಟದಲ್ಲಿ ಗ್ರಾಮೀಣ ಯುವಜನರು ಕಂಪ್ಯೂಟರ್, ಇಂಗ್ಲಿಷ್, ವ್ಯಕ್ತಿತ್ವ ವಿಕಸನದಂತಹ ಅನೇಕ ಜ್ನಾನ ಶಾಖೆಗಳನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಲಾಗದ ಪರಿಸ್ಥಿತಿಯಲ್ಲಿದ್ದಾರೆ. ಈ ಆಧುನಿಕ ಜ್ನಾನ ಅವರಿಗೆ ಲಭ್ಯವಾಗದಿದ್ದಲ್ಲಿ ಅವರು ಸ್ಪರ್ಧೆಯ ಕಣಕ್ಕೆ ಇಳಿಯಲಾರರು. ಈ ಆಧುನಿಕ ಜ್ನಾನವನ್ನು ಸುಲಭದಲ್ಲಿ ಮತ್ತು ಕಡಿಮೆ ಖರ್ಚಿನಲ್ಲಿ ಸಾಮೂಹಿಕವಾಗಿ ಒದಗಿಸಬಹುದಾದ ದಾರಿ-ಶೈಕ್ಷಣಿಕ ಚಿತ್ರಗಳ ನಿರ್ಮಾಣ. ಗ್ರಾಮೀಣ ಯುವಜನರು ಜಾಗತೀಕರಣ ಮತ್ತು ಆಧುನಿಕತೆಯ ಸವಾಲುಗಳನ್ನು ಎದುರಿಸಲು ಅವರಿಗೆ ಬೇಕಾಗುವ ಎಲ್ಲಾ ರೀತಿಯ ಶೈಕ್ಷಣಿಕ ಚಿತ್ರಗಳನ್ನು-ಅತ್ಯಂತ ಕಡಿಮೆ ಖರ್ಚಿನಲ್ಲಿ ತೋರಿಸಿ ತರಬೇತಿ ನೀಡುವುದು-ಈ ಯತ್ನದ ಹಿಂದಿರುವ ಉದ್ದೇಶ-ಎನ್. ಭವಾನಿಶಂಕರ್

No comments:

Post a Comment